ವಾರಾಂತ್ಯ ಕರ್ಪ್ಯೂ ಹಿನ್ನೆಲೆಯಲ್ಲಿ ಇಂದು ಉಡುಪಿ
ಜಿಲ್ಲೆಯಾದ್ಯಂತ ವಾಹನ ಹಾಗೂ ಜನ ಸಂಚಾರ ಸಾಕಷ್ಟು
ವಿರಳವಾಗಿ ಕಂಡು ಬಂದವು. ಖಾಸಗಿ ಸರ್ವಿಸ್, ಸಿಟಿ
ಹಾಗೂ ಕೆಎಸ್‌ಆರ್‌ಟಿಸಿ ಮತ್ತು ನರ್ಮ್ ಬಸ್‌ಗಳು ಎಲ್ಲ
ಮಾರ್ಗಗಳಲ್ಲಿಯೂ ಸಂಚರಿಸುತ್ತಿದ್ದವು. ರಿಕ್ಷಾ, ಟ್ಯಾಕ್ಸಿಗಳು
ಎಂದಿನಂತೆ ನಿಲ್ದಾಣಗಳಲ್ಲಿ ಕಂಡುಬಂದವು. ನಗರದಲ್ಲಿ
ಖಾಸಗಿ ವಾಹನ ಹಾಗೂ ಜನ ಸಂಚಾರ ವಿರಳ ಬಿಟ್ಟರೆ
ಉಳಿದವು ಸಾಮಾನ್ಯದಂತೆಯೇ ಕಂಡುಬಂದವು.
ತರಕಾರಿ, ಹಣ್ಣು, ದಿನಸಿ, ಸೂಪರ್ ಮಾರ್ಕೆಟ್, ಬೇಕರಿ,
ಹೂವುವಿನ ಅಂಗಡಿಗಳು, ಪೆಟ್ರೋಲ್ ಬಂಕ್, ಮೆಡಿಕಲ್
ತೆರೆದಿದ್ದರೆ, ಚಿನ್ನಾಭರಣ, ಬಟ್ಟೆ, ಚಪ್ಪಲಿ, ಹಾರ್ಡ್‌ವೇರ್
ಸೇರಿದಂತೆ ಇತರ ಅಂಗಡಿಗಳು ಬಂದ್ ಆಗಿರುವುದು
ಕಂಡುಬಂದವು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಗತ್ಯ
ವಸ್ತುಗಳ ಸಾಗಾಟದ ವಾಹನಗಳು ಬಿಟ್ಟರೆ ಉಳಿದವುಗಳ
ಓಡಾಟ ಕಡಿಮೆಯಾಗಿದ್ದವು. ಜಿಲ್ಲೆಯ ಕೆಲವೆಡೆ
ಪೊಲೀಸರು ವಾಹನಗಳ ತಪಾಸಣಾ ಕಾರ್ಯವನ್ನು
ನಡೆಸಿದರು.ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಪೊಲೀಸ್
ಬಂದೋಬಸ್ತ್ ಏರ್ಪಡಿಸಲಾಗಿತ್ತು.
0 Comments
Please comment if you like the post