ಕೋವಿಡ್ ನಿಯಂತ್ರಣಕ್ಕೆ ಜಾರಿ ಮಾಡಿರುವ ವಾರಾಂತ್ಯ
ಕರ್ಪ್ಯೂ ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದ
ಬಟ್ಟೆ ಅಂಗಡಿ ಮಾಲೀಕನವಿರುದ್ದ ಕುಂದಾಪುರ
ಠಾಣೆಯಲ್ಲಿ ದೂರು ದಾಖಲಾಗಿದೆ. ಕುಂದಾಪುರ
ಪುರಸಭೆಯಂಪರಿಸರ ಅಭಿಯಂತರ ಗುರುಪ್ರಸಾದ್
ಅವರು ಪುರಸಭಾ ವ್ಯಾಪ್ತಿಯಲ್ಲಿ ವೀಕ್ಷಣೆಯ ಕರ್ತವ್ಯದಲ್ಲಿ
ದ್ದಾಗ ಬೆಳಿಗ್ಗೆ 10.30 ರ ವೇಳೆಗೆ ಕುಂದಾಪುರ ಪೇಟೆಯ
ಪುರಸಭೆ ಮುಖ್ಯರಸ್ತೆಯ ಹಳೆ ಬಸ್ ನಿಲ್ದಾಣದಬಳಿ
ಇರುವ ಕಟ್ಟಡದ ಕೆಳ ಅಂತಸ್ತಿನಲ್ಲಿ ಅಬ್ದುಲ್ ಫತಾ
ಹಸನ್ ಎಂಬಾತ ಬಟ್ಟೆ ಅಂಗಡಿಯನ್ನು ತೆರೆದು ಮಾರಾಟ
ವಹಿವಾಟು ನಡೆಸುತ್ತಿರುವುದುಂಕಂಡುಬಂದಿದೆ.
ಅದರಂತೆ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು
ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹೊರಡಿಸಿದ
ಮಾರ್ಗ ಸೂಚಿ, ನಿಯಮಗಳನ್ನು ಉಲ್ಲಂಘಿಸಿರುವುದಾಗಿ
ಕುಂದಾಪುರ ಪೊಲೀಸ್ ಠಾಣೆಯಲ್ಲಿ ನಿನ್ನೆ ಪ್ರಕರಣ
ದಾಖಲಾಗಿದೆ.
Following our website
0 Comments
Please comment if you like the post