ಶಾಂತಿನಗರದಲ್ಲಿ ಹೋಟೇಲ್ ಮಾಲಿಕನ ಸ್ಕೂಟರ್
ನ್ನು ಸಿಬ್ಬಂದಿಯೇ ಕಳವು ಮಾಡಿರುವುದಾಗಿ ನಗರ
ಠಾಣೆಯಲ್ಲಿ ನಿನ್ನೆ ದೂರು ದಾಖಲಾಗಿದೆ. ಈ ಬಗ್ಗೆ
ಸಂತೋಷ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅದರಂತೆ ಇವರು ಶಾಂತಿನಗರದಲ್ಲಿ ರೆಸ್ಟೋರೆಂಟ್
ವೊಂದನ್ನ ನಡೆಸಿಕೊಂಡಿದ್ದು, ಜ. 5 ರಂದು ಹೋಟೆಲ್
ನಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀಧರ ಬೈಂದೂರು
ಎಂಬಾತ ಹೋಟೇಲ್‌ನ ಡ್ರಾವರ್ ನಲ್ಲಿಟ್ಟಿದ್ದ ದ್ವಿಚಕ್ರ
ವಾಹನದ ಕೀಯನ್ನು ತೆಗೆದುಕೊಂಡು ದೂರುದಾರರಿಗೆ
ತಿಳಿಯದಂತೆ ಹೋಟೇಲ್‌ನ ಹೊರಭಾಗದಲ್ಲಿ ನಿಲ್ಲಿಸಿದ್ದ
ಸ್ಕೂಟರ್ ನ್ನು ಕಳವು ಮಾಡಿಕೊಂಡು ಹೋಗಿದ್ದಾನೆ
ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ
0 Comments
Please comment if you like the post