Ticker

6/recent/ticker-posts

ಕೋವಿಡ್, ಓಮೈಕ್ರಾನ್‌ನಿಂದ ಹೆಚ್ಚಿನ ಅಪಾಯ ಇಲ್ಲಎಂದಾದ ಮೇಲೆ ವಾರಾಂತ್ಯದ ಕರ್ಪ್ಯೂ ಯಾಕೆ?


ಕೋವಿಡ್, ಓಮೈಕ್ರಾನ್‌ನಿಂದ ಹೆಚ್ಚಿನ ಅಪಾಯ ಇಲ್ಲ
ಎಂದಾದ ಮೇಲೆ ವಾರಾಂತ್ಯದ ಕರ್ಪ್ಯೂ ಯಾಕೆ? ಜನರು
ಸಂಕಷ್ಟದಲ್ಲಿದ್ದು, ಬದುಕಲು ಬಿಡಿ' ಎಂದು ಹೆಬ್ರಿ ಬ್ಲಾಕ್
ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ
ಮನವಿ ಮಾಡಿದರು. ಇಂದು ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, 'ಲಾಕ್‌ಡೌನ್, ಕರ್ಪ್ಯೂ ಬೇಡ
ಎಂದು ಶಾಸಕ ರಘುಪತಿ ಭಟ್ ಕೂಡ ಹೇಳಿದ್ದಾರೆ. ಆದರೆ,
ಸರ್ಕಾರದ ಆದೇಶ ಇದೆ ಎನ್ನುವ ಜಿಲ್ಲಾಡಳಿತ ಕಠಿಣ
ಕ್ರಮ ಕೈಗೊಳ್ಳುತ್ತಿದೆ. ಹೀಗಾದರೆ ಜನ ಬದುಕುವುದು
ಹೇಗೆ?' ಎಂದು ಪ್ರಶ್ನಿಸಿದರು.'ನಮ್ಮ ಜಿಲ್ಲೆಯಲ್ಲಿ ಇಬ್ಬರು
ಸಚಿವರಿದ್ದರೂ, ಒಬ್ಬರಿಗೂ ಜನರ ಸಂಕಷ್ಟ
ಅರ್ಥವಾಗುತ್ತಿಲ್ಲ. ಲಾಕ್‌ಡೌನ್‌ ಬಗ್ಗೆ ಚಕಾರವೇ ಎತ್ತುತ್ತಿಲ್ಲ.
ಸರ್ಕಾರ, ಸಚಿವರು, ಶಾಸಕರು ಬೇಕಾದಷ್ಟು ಜನರನ್ನು
ಸೇರಿಸಿ ಸಭೆ ಮಾಡಬಹುದು. ಚುನಾವಣೆಗಳಲ್ಲಿ
ಸರ್ಕಾರದ ಪ್ರತಿನಿಧಿಗಳೇ ಬೃಹತ್ ಸಭೆ ನಡೆಸಿದ್ದಾರೆ.
ಆದರೆ, ಜನರಿಗೆ ಮಾತ್ರ ಕಠಿಣ ಕಾನೂನು' ಎಂದು
ಆಕ್ರೋಶ ವ್ಯಕ್ತಪಡಿಸಿದ ಅವರು, 'ಇದು ಜನರನ್ನು
ಹೈರಾಣಾಗಿಸುವ ಸರ್ಕಾರದ ಹುನ್ನಾರ.
ಜನಸಾಮಾನ್ಯರಿಗೆ ಒಂದು ಸರ್ಕಾರಕ್ಕೆ ಮತ್ತೊಂದು
ಕಾನೂನು ಇದೆಯಾ?' ಎಂದು ದೂರಿದರು. ಉಡುಪಿ
ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ನೀರೆ ಕೃಷ್ಣಶೆಟ್ಟಿ,
ಹೆಬ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್
ಕಬ್ಬಿನಾಲೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಚ್.
ಜನಾರ್ದನ, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ,
ಪ್ರಮುಖರಾದ ಶಶಿಕಲಾ ಡಿ. ಪೂಜಾರಿ, ವಿಶು ಕುಮಾರ್
ಇದ್ದರು.

Post a Comment

0 Comments